ಹಿಮಾಂಶು ನಡೆದು ಬಂದ ದಾರಿ

“ಹಿಮಾಂಶು ಎಂದಿಗೂ ಕಂದದಾ ಕುಸುಮ” ವಾಗಿ ಬೆಳೆಯುತ್ತಾಶಿಕ್ಷಣಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ಕೊಡದೆ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳಿಗೂ ಉತ್ತಮ ಮೌಲ್ಯ,ಶಿಸ್ತು,ಸಂಸ್ಕೃತಿ, ಸಂಸ್ಕಾರಕ್ಕೆ ಮಹತ್ವ ಕೊಡುತ್ತಾ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಈ ಸಂಸ್ಥೆಯ ಸಂಸ್ಥಾಪಕರು ಶ್ರೀಯುತ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ಸುಂದರಮ್ಮನವರು. ೧೯೪೨ ರಲ್ಲಿ ಅವರ ಪುತ್ರಿಯಾದ ಶ್ರೀಮತಿ ಚಿತ್ರಾರವರಿಗೆ ಉತ್ತಮ ಶಾಲಾ ವಾತಾವರಣವನ್ನು ನಿರ್ಮಿಸಲು “ಹಿಮಾಂಶು ಶಿಶುವಿಹಾರ”ವನ್ನು ಪ್ರಾರಂಭಿಸಿದರು. ೧೯೫೪ ರಲ್ಲಿ ಹಿಮಾಂಶು ಶಿಶುವಿಹಾರವು “ ಹಿಮಾಂಶು ಜ್ಯೋತಿಕಲಾಪೀಠ ” ಎಂದು ಕರೆಯಲ್ಪಟ್ಟಿತು. ೧೯೬೫ರಲ್ಲಿಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. ೧೯೬೭-೬೮ ರಲ್ಲಿ ಮಾಂಟೆಸ್ಸೂರಿ ಶಿಕ್ಷಣ ಪದ್ಧತಿಯನ್ನು ಪ್ರಾರಂಭಿಸಲಾಯಿತು. ೧೯೭೨ ರಲ್ಲಿ ಶಿಶುವಿಹಾರದ “ಶಿಕ್ಷಕಿಯರ ತರಬೇತಿ” ಕೇಂದ್ರವು ತೆರೆಯಲ್ಪಟ್ಟಿತು. ಶಾಸ್ತ್ರಿಯವರು ಶಿಕ್ಷಣದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು. ಪ್ರೌಢಶಾಲೆಯು ೧೯೮೩ ರಲ್ಲಿ ಪ್ರಾರಂಭವಾಯಿತು. ೨೦೦೫ ರಲ್ಲಿ “ಪದವಿ ಪೂರ್ವ ಕಾಲೇಜು”ಅನ್ನು ಪ್ರಾರಂಭಿಸಿದರು. ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಮಾಂಟೆಸ್ಸೂರಿ ಮತ್ತು ಕಿಂಡರ್ ಗಾರ್ಟನ್ ಎಂಬ ಎರಡೂ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದು ಹಿಮಾಂಶು ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಶಿಶುವಿಹಾರದಿಂದ ಪದವಿ ಪೂರ್ವ ಕಾಲೇಜಿನ ತನಕ “ ಹಿಮಾಂಶು” ಬೆಳೆದು ಬರಲು ಶಾಸ್ತ್ರಿಗಳ ಕ್ರಿಯಾಶೀಲತೆಯೇ ಕಾರಣ. ೧೯೧೭ ರಲ್ಲಿ “ ಅಮೃತ ಮಹೋತ್ಸವ ” ವನ್ನು ಆಚರಿಸಿಕೊಂಡಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಇಂದು ಅವರ ಮಗಳಾದ ಶ್ರೀಮತಿ ಚಿತ್ರಾ.ಎ.ರಾವ್ ಹಾಗು ಅವರ ಪತಿಯಾದ ಡಾ. ಬಿ.ವಿ.ಎ ರಾವ್ ಅವರ ಸಹಕಾರದೊಂದಿಗೆ ಅಪಾರ ಜ್ಞಾನ ಮತ್ತು ಅನುಭವದೊಂದಿಗೆ ಈ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ.